ಶಾಲಾ ಮಕ್ಕಳಿಗೆ ಚೆಂದದ ಟ್ಯಾಬ್ಲೆಟ್ ಕೊಟ್ಟ ಶೆಟ್ಟರ್
ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಾಲಾ ಮಕ್ಕಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಟ್ಯಾಬ್ಲೆಟ್ ವೊಂದನ್ನು ಬಿಡುಗಡೆ ಮಾಡಿದ್ದಾರೆ. ಆಪ್ ಟ್ಯಾಬ್ ಐಟೆಕ್ ಎಂಬ ಸಂಸ್ಥೆ ವಿನ್ಯಾಸಗೊಳಿಸಿರುವ ಈ ಟ್ಯಾಬ್ಲೆಟ್ ಬೆಲೆ 4,999 ರು ತಗುಲುತ್ತದೆ. ವಿಜ್ಞಾನ ಮತ್ತು ಗಣಿತ ವಿಷಯ ಅರಿತುಕೊಳ್ಳಲು ಈ ಟ್ಯಾಬ್ಲೆಟ್ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎಂದು ಐಟೆಕ್ ಸಂಸ್ಥೆ ಹೇಳಿದೆ.
ಮಾರುಕಟ್ಟೆಯಲ್ಲಿ ಸುಮಾರು 20 ರಿಂದ 40 ಸಾವಿರ ರು ಬೆಲೆಬಾಳುವ ಟ್ಯಾಬ್ಲೆಟ್ ಗಳು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ದೊರೆಯುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಟ್ಯಾಬ್ಲೆಟ್ ನಿಂದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಿಎಂ ಶೆಟ್ಟರ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮಕ್ಕೆ ಅನುಕೂಲಕ್ಕೆ ತಕ್ಕಂತೆ ಈ ಟ್ಯಾಬ್ಲೆಟ್ ವಿನ್ಯಾಸಗೊಳಿಸಲಾಗಿತ್ತು. ಇದಕ್ಕೆ ಇಂಟರ್ನೆಟ್ ಸೌಲಭ್ಯ ಒದಗಿಸಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಪಠ್ಯ ವಿಷಯ ಬಿಟ್ಟು ಇತರೆ ವಿಷಯಗಳತ್ತ ಕಣ್ಣು ಹಾಯಿಸುವುದನ್ನು ತಪ್ಪಿಸಬಹುದು ಎಂದು ಸಂಸ್ಥೆಯ ಸಿಇಒ ಜೆಕೆ ಸುರೇಶ್ ಹೇಳಿದರು.
ಯುರೋಪಿಯನ್ ಕಂಪನಿಗಳ ಸಹಾಯ ಪಡೆದು ತಂತ್ರಜ್ಞಾನ ರೂಪಿಸಲಾಗಿದೆ. ಇದೇ ಮಾದರಿ ಟ್ಯಾಬ್ಲೆಟ್ ಗಳನ್ನು ವಿನ್ಯಾಸಗೊಳಿಸಿ ದೇಶಿ ಮಾರುಕಟ್ಟೆಗೆ ಪರಿಚಯಿಸಲು ಯುರೋಪಿಯನ್ ಕಂಪನಿ ಉತ್ಸುಕವಾಗಿದೆ. ಇದಕ್ಕೆ ಸರ್ಕಾರ ಸೂಕ್ತ ಸ್ಥಳಾವಕಾಶ ಒದಗಿಸುತ್ತದೆ ಎಂಬ ನಂಬಿಕೆ ಇದೆ ಎಂದು ಸುರೇಶ್ ಭರವಸೆ ವ್ಯಕ್ತಪಡಿಸಿದರು.
More: http://kannada.gizbot.com/computer/tablet-for-children-app-tab-itech-bangalore
No comments:
Post a Comment